ಯಶಸ್ವಿನಿ-ಸದಸ್ಯತ್ವ ನೊಂದಣಿಗೆ ಅರ್ಜಿ ಆಹ್ವಾನ

yashashwiniತುಮಕೂರು ಆ.29: ಕರ್ನಾಟಕ ಸರ್ಕಾರದ ಯಶಸ್ವಿನಿ ರೈತರ ಆರೋಗ್ಯ ರಕ್ಷಣಾ ಯೋಜನೆಯು ರಾಜ್ಯದಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯಡಿ ಆರೋಗ್ಯ ರಕ್ಷಣೆಯನ್ನು ಪಡೆಯಲು ಗ್ರಾಮೀಣ ಸಹಕಾರ ಸಂಘಗಳಲ್ಲಿ ಆಗಸ್ಟ್ ೧, ೨೦೧೩ಕ್ಕೆ ಮೂರು ತಿಂಗಳು ಮುಂಚಿತವಾಗಿ ಸದಸ್ಯರಾದವರು ಹಾಗೂ ನವಜಾತ ಶಿಶುವಿನಿಂದ ಹಿಡಿದು ೭೫ವರ್ಷದವರೆಗಿನವರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಈ ಯೋಜನೆಯ ವಂತಿಗೆ ಮೊತ್ತ ರೂ.೨೧೦/- ಗಳಾಗಿದ್ದು, ಪ.ಜಾತಿ, ಪ.ಪಂಗಡದವರಿಗೆ ಈ ಯೋಜನೆ ವಂತಿಗೆಯು ಉಚಿತವಾಗಿರುತ್ತದೆ. ಕೇವಲ ೧೦/- ರೂ.ಗಳನ್ನು ಪ್ರವೇಶಧನ ಪಾವತಿಸುವುದರ ಮೂಲಕ ನೊಂದಾಯಿಸಿಕೊಳ್ಳಲು ಕೋರಿದೆ.
ಉಪವಿಭಾಗದ ಸಹಕಾರ ಸಂಘಗಳು ಸೆ.೧, ೨೦೧೩ರೊಳಗೆ ಆಡಿಟ್ ಮುಗಿಸಿ ಸೆಪ್ಟೆಂಬರ್ ೨೫ರೊಳಗೆ ಸಾಮಾನ್ಯ ನಿಕಾಯ (ಸರ್ವಸದಸ್ಯರ ಸಭೆ) ನಡೆಸಲು ಕ್ರಮವಿಡಬೇಕಾಗಿದ್ದು, ಅಕ್ಟೋಬರ್ ೩೧ರೊಳಗೆ ತಿದ್ದುಪಡಿ ಉಪನಿಯಮಕ್ಕೆ ನೊಂದಣಿ ಮಾಡಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಲೇಜು ಪ್ರಾಂಶುಪಾಲರ ಗಮನಕ್ಕೆ 
ತುಮಕೂರು ಆ.29: ರಾಜ್ಯದ ಪದವಿಪೂರ್ವ, ಐಟಿಐ. ಡಿಪ್ಲೋಮಾ, ಪಾಲಿಟೆಕ್ನಿಕ್, ಪದವಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್, ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಮತ್ತು ಪಶುವೈದ್ಯಕೀಯ, ಸ್ನಾತಕೋತ್ತರ, ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ ಇತ್ಯಾದಿ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ವತಿಯಿಂದ ನೀಡಲಾಗುತ್ತದೆ.
ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕಾಗಿದ್ದು ಇದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲೇಜುಗಳ ಹಾಗೂ ಕೋರ್ಸುಗಳ ವಿವರಗಳು ಅಗತ್ಯವಿದ್ದು, ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಕಾಲೇಜುಗಳ ರಿಜಿಸ್ಟ್ರೇಷನ್ ನಂ., ಅಫಿಲಿಯೇಷನ್ ನಂ., ಪೂರ್ಣ ವಿಳಾಸ, ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ವೆಬ್ ಸೈಟ್ ಇದ್ದಲ್ಲಿ, ಕಾಲೇಜಿನ ಬ್ಯಾಂಕ್ ಖಾತೆ / ಐ.ಎಫ್.ಎಸ್.ಸಿ., ಕೋಡ್, ಭೋಧಿಸಲಾಗುತ್ತಿರುವ (ಮಾನ್ಯತೆ ಪಡೆದ) ಕೋರ್ಸ್‌ಗಳು ಮಾಹಿತಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್‌ಪೋರ್ಟಲ್  http://karepass.cgg.gov.inರಲ್ಲಿ ಅಪ್‌ಲೋಡ್ ಮಾಡಲು ಕೋರಿದೆ.
ಅಪ್‌ಲೋಡ್ ಮಾಡದ ಕಾಲೇಜಿನ ಪ್ರಾಂಶುಪಾಲರು, ತಮ್ಮ ಕಾಲೇಜಿನ ಯೂಸರ್‌ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಹಾಗೂ ಇತರೆ ವಿವರಗಳನ್ನು ಸಂಬಂಧಿಸಿದ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಿ ಪಡೆದು, ಆ.೩೧, ೨೦೧೩ರೊಳಗಾಗಿ ತಪ್ಪದೇ ಅಪ್‌ಲೋಡ್ ಮಾಡಲು ಕೋರಲಾಗಿದೆ.
ವಿದ್ಯಾರ್ಥಿವೇತನ, ಶುಲ್ಕ ವಿನಾಯತಿ, ಇತ್ಯಾದಿಗಳನ್ನು ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ಇರುವ ರೀತಿಯಲ್ಲಿಯೇ ಅವರ ಹೆಸರಿನಲ್ಲಿ ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅವರಿಗೆ ಸೂಚನೆ ನೀಡುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಜಿಲ್ಲೆ

ರಾಜ್ಯ - ರಾಷ್ಟ್ರೀಯ ಸುದ್ದಿಗಳು